ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 31-07-2021

at 00:00 hrs to 24:00 hrs

 

ಚಿತ್ತಾಕುಲಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 42/2021, ಕಲಂ: 457, 380 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರಾದ ಯಾರೋ ಕಳ್ಳರು ಅಪರಿಚಿತರಾಗಿದ್ದು, ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ. ಪಿರ್ಯಾದಿಯು ಚಿಂಚೆವಾಡಾದಲ್ಲಿ ತನ್ನ ಕುಟುಂಬದವರೊಂದಿಗೆ ವಾಸವಾಗಿದ್ದು, ದಿನಾಂಕ: 30-07-2021 ರಂದು ಕೆಲಸಗಾರರು ಮನೆಗೆ ಹೋದ ನಂತರ ಪಿರ್ಯಾದಿಯು ಬೇಕರಿ ಬಂದ್ ಮಾಡಿ ಬಂದಿದ್ದು, ದಿನಾಂಕ: 31-07-2021 ರಂದು ಬೆಳಿಗ್ಗೆ ಬೇಕರಿಗೆ ಕೆಲಸ ಮಾಡಲು ಹೋದ ರೇಷ್ಮಾ ರವರು ಬೇಕರಿಯ ಹಿಂದಿನ ಬಾಗಿಲು ಓಪನ್ ಆಗಿರುವ ಬಗ್ಗೆ ಹಾಗೂ ಬೇಕರಿಯ ಕಿಚನ್ ನಲ್ಲಿ ಮೆಲ್ಛಾವಣಿಗೆ ಅಳವಡಿಸಿದ ಸಿಮೆಂಟಿನ ಶೀಟ್ ಅನ್ನು ಪಕ್ಕಕ್ಕೆ ಯಾರೋ ಸರಿಸಿದ ಬಗ್ಗೆ ತಿಳಿಸಿದ್ದರಿಂದ ಪಿರ್ಯಾದಿಯು ತನ್ನ ಮಹಾಮಾಯಾ ಬೇಕರಿಗೆ ಹೋಗಿ ನೋಡಲಾಗಿ ಹಿಂದಿನ ಬಾಗಿಲನ್ನು ಒಳಗಡೆಯಿಂದಲೇ ತೆಗೆದ ಬಗ್ಗೆ ಕಂಡು ಬರುತಿದ್ದು, ಕಿಚನ್ ನ ಮೇಲ್ಗಡೆಯಲ್ಲಿ ಛಾವಣಿಗೆ ಅಳವಡಿಸಿದ ಸಿಮೆಂಟ್ ಶೀಟ್ ಅನ್ನು ಪಕ್ಕಕ್ಕೆ ಸರಿಸಿದ ಬಗ್ಗೆ ಕಂಡು ಬಂದಿರುತ್ತದೆ, ಅಂಗಡಿಯಲ್ಲಿ ಪರಿಶೀಲಿಸಲಾಗಿ ಅಂಗಡಿಯಲ್ಲಿದ್ದ ಸಾಮಾನುಗಳು ಅಸ್ತವ್ಯಸ್ತವಾಗಿ ಬಿದ್ದಿದ್ದು, ಡ್ರಾವರ್ ದಲ್ಲಿ ಇಟ್ಟಿದ್ದ ಸುಮಾರು 4,300/- ರೂಪಾಯಿ ನಗದು ಹಣ ಮತ್ತು ಸುಮಾರು 10,000/- ರೂಪಾಯಿ ಮೌಲ್ಯದ ಅಂಗಡಿಗೆ ಅಳವಡಿಸಿದ 5 ಸಿಸಿಟಿವಿ ಕ್ಯಾ,ರಾ ಹಾಗೂ ಕಂಪ್ಯೂಟರ್  ಮಾನಿಟರ್ ಅನ್ನು ಆರೋಪಿತರಾದ ಯಾರೋ ಕಳ್ಳರು ದಿನಾಂಕ: 30-07-2021 ರಂದು 22-30 ಗಂಟೆಯಿಂದ ದಿನಾಂಕ: 31 -07-2021 ರಂದು 06-30 ಗಂಟೆಯ ನಡುವಿನ ಅವಧಿಯಲ್ಲಿ ತೆಗೆದುಕೊಂಡು ಹೋದ ಬಗ್ಗೆ ಪಿರ್ಯಾದಿ ಶ್ರೀ ಶಶಿಕಾಂತ ತಂದೆ ಶಾಂತಾರಾಮ ಕದಮ್, ಪ್ರಾಯ-50 ವರ್ಷ, ವೃತ್ತಿ-ಬೇಕರಿ ಕೆಲಸ, ಸಾ|| ಚಿಂಚೆವಾಡ, ಸದಾಶಿವಗಡ, ಕಾರವಾರ ರವರು ದಿನಾಂಕ: 31-07-2021 ರಂದು 08-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಅಂಕೋಲಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 116/2021, ಕಲಂ: 279, 338 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ರಾಜೇಶ ತಂದೆ ಅಣ್ಣಿ ಸಿದ್ದಿ, ಸಾ|| ದೇವಕಾರ, ದುಗ್ಗನಮನೆ, ತಾ: ಅಂಕೋಲಾ (ಟ್ರ್ಯಾಕ್ಟರ್ ಚಾಲಕ). ಈತನು ದಿನಾಂಕ: 23-07-2021 ರಂದು ಬೆಳಿಗ್ಗೆ 11-00 ಗಂಟೆಯ ಸುಮಾರಿಗೆ ದೀಪಕ ತಂದೆ ಪುಂಡಲೀಕ ನಾಯ್ಕ, ಸಾ|| ಹಳವಳ್ಳಿ, ತಾ: ಅಂಕೋಲಾ ಇವರಿಗೆ ಸೇರಿದ ಟ್ರ್ಯಾಕ್ಟರ್ ಅನ್ನು ಕನಕನಹಳ್ಳಿಯಲ್ಲಿರುವ ದಿನೇಶ ದೇಶಭಂಡಾರಿ ಇವರ ಚೀರೆ ಕಲ್ಲಿನ ಕ್ವಾರಿಯಲ್ಲಿ ಟ್ರ್ಯಾಕ್ಟರಿನ ಮೇಲೆ ಪಿರ್ಯಾದಿಯೊಂದಿಗೆ ಟ್ರ್ಯಾಕ್ಟರ್ ಚಾಲಕನಾದ ಆರೋಪಿತನು ಕೂಡಿ ಚೀರೆ ಕಲ್ಲು ತುಂಬಿದ್ದು, ನಂತರ ಆರೋಪಿ ಟ್ರ್ಯಾಕ್ಟರ್ ಚಾಲಕನು ಟ್ರ್ಯಾಕ್ಟರ್ ಹತ್ತಿ ಚಾಲು ಮಾಡಿ, ಪಿರ್ಯಾದಿಯವರು ಟ್ರ್ಯಾಕ್ಟರಿನ ಹಿಂದುಗಡೆ ನಿಂತುಕೊಂಡಿದ್ದನ್ನು ಗಮನಿಸದೇ ಒಮ್ಮೇಲೆ ಹಿಂದಕ್ಕೆ ಚಲಾಯಿಸಿ, ಪಿರ್ಯಾದಿಗೆ ಟ್ರ್ಯಾಕ್ಟರಿನ ಹಿಂದಿನ ಬಾಡಿ ಭಾಗ ಡಿಕ್ಕಿಯಾಗುವಂತೆ ಮಾಡಿ ಅಪಘಾತ ಪಡಿಸಿ, ಇದರಿಂದ ಪಿರ್ಯಾದಿಯು ನೆಲಕ್ಕೆ ಕೆಡವಿ ಬಿದ್ದು, ಎಡಭಾಗದ ಸೊಂಟಕ್ಕೆ ಹಾಗೂ ಬಲಗಾಲಿನ ಪಾದದ ಗಂಟಿನ ಹತ್ತಿರ ಭಾರೀ ಗಾಯನೋವು ಪಡಿಸಿದ್ದಲ್ಲದೇ, ಆರೋಪಿ ಟ್ರ್ಯಾಕ್ಟರ್ ಚಾಲಕನು ಟ್ರ್ಯಾಕ್ಟರನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಹೋದ ಬಗ್ಗೆ ಪಿರ್ಯಾದಿ ಶ್ರೀ ರಾಘವೇಂದ್ರ ತಂದೆ ಕೃಷ್ಣ ಸಿದ್ಧಿ, ಪ್ರಾಯ-37 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಕನಕನಹಳ್ಳಿ, ಹಳವಳ್ಳಿ, ತಾ: ಅಂಕೋಲಾ ರವರು ದಿನಾಂಕ: 31-07-2021 ರಂದು 03-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಕುಮಟಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 137/2021, ಕಲಂ: 78(3) ಕರ್ನಾಟಕ ಪೊಲೀಸ್ ಎಕ್ಟ್ ನೇದ್ದರ ವಿವರ...... ನಮೂದಿತ ಆರೋಪಿತ ದತ್ತಾತ್ರೇಯ @ ದತ್ತಾ ಮಹಾಬಲೇಶ ಗಾವಡಿ, ಪ್ರಾಯ-42 ವರ್ಷ, ವೃತ್ತಿ-ಚಹಾ ತಿಂಡಿ ವ್ಯಾಪಾರ, ಸಾ|| ಹೊನ್ಮಾಂವ್, ಲಕ್ಷ್ಮಿ ಆಟೋ ಮೊಬೈಲ್ಸ್ ಹತ್ತಿರ, ತಾ: ಕುಮಟಾ. ಈತನು ದಿನಾಂಕ: 31-07-2021 ರಂದು 12-40 ಗಂಟೆಗೆ ಕುಮಟಾ ಪಟ್ಟಣದ ಹೊನ್ಮಾಂವ್ ಕ್ರಾಸ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ತನ್ನ ಚಹಾ ಅಂಗಡಿಯ ಎದುರಿಗೆ ನಿಂತು ರಸ್ತೆಯಿಂದ ತಿರುಗಾಡುವ ಜನರಿಗೆ ಕರೆದು 01/- ರೂಪಾಯಿಗೆ 80/- ರೂಪಾಯಿ ಕೊಡುವುದಾಗಿ ಹೇಳಿ ಜನರನ್ನು ಕೂಗಿ ಕರೆದು ಸಾರ್ವಜನಿಕರಿಂದ ಹಣ ಪಡೆದು ಅಂಕೆ-ಸಂಖ್ಯೆಗಳ ಮೇಲೆ ಹಣವನ್ನು ಪಂಥ ಕಟ್ಟಿ ಓ.ಸಿ ಚೀಟಿ ಬರೆದು ಓ.ಸಿ ಮಟಕಾ ಜುಗಾರಾಟ ನಡೆಸುತ್ತಿದ್ದಾಗ ದಾಳಿಯ ಕಾಲ 1). ನಗದು ಹಣ 1,180/- ರೂಪಾಯಿ, 2). ಅಂಕೆ-ಸಂಖ್ಯೆ ಬರೆದ ಚೀಟಿ-01, ಅ||ಕಿ|| 00.00/- ರೂಪಾಯಿ, 3). ಬಾಲ್ ಪೆನ್-01, ಅ||ಕಿ|| 00.00/- ರೂಪಾಯಿ. ಇವುಗಳ  ಸಮೇತ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಆನಂದಮೂರ್ತಿ ಸಿ, ಪಿ.ಎಸ್.ಐ (ಕಾ&ಸು), ಕುಮಟಾ ಪೊಲೀಸ್ ಠಾಣೆ ರವರು ದಿನಾಂಕ: 31-07-2021 ರಂದು 18-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

                      

ಹೊನ್ನಾವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 200/2021, ಕಲಂ: ಮಹಿಳೆ ಕಾಣೆ ನೇದ್ದರ ವಿವರ...... ನಮೂದಿತೆ ಕಾಣೆಯಾದ ಮಹಿಳೆ ಶ್ರೀಮತಿ ಕವಿತಾ ಕೋಂ. ಕಿರಣ ಮಹಾಲೆ, ಪ್ರಾಯ-35 ವರ್ಷ, ಸಾ|| ಗಾಂಧಿನಗರ, ತಾ: ಹೊನ್ನಾವರ. ಪಿರ್ಯಾದಿಯವರ ಹೆಂಡತಿಯಾದ ಇವಳು ದಿನಾಂಕ: 02-04-2021 ರಂದು 10-00 ಗಂಟೆಗೆ ಹೊನ್ನಾವರ ಪಟ್ಟಣದ ಗಾಂಧಿನಗರದಲ್ಲಿರುವ ತನ್ನ ಮನೆಯಿಂದ ಮಂಗಳೂರಿಗೆ ಕೆಲಸಕ್ಕೆ ಹೋಗಿ ಬರುವುದಾಗಿ ಹೇಳಿ ಹೋದವಳು, ಈವರೆಗೂ ಮನೆಗೆ ಬಾರದೇ ಮೋಬೈಲ್ ಸಂಪರ್ಕಕ್ಕೂ ಸಿಗದೇ, ಎಲ್ಲಿಯೋ ಹೋಗಿ ಕಾಣೆಯಾಗಿದ್ದು, ಕಾಣೆಯಾದ ತನ್ನ ಹೆಂಡತಿಯನ್ನು ಹುಡುಕಿ ಕೊಡುವಂತೆ ಕೋರಿದ ಬಗ್ಗೆ ಪಿರ್ಯಾದಿ ಶ್ರೀ ಕಿರಣ ತಂದೆ ವಿಕ್ಕು ಮಹಾಲೆ, ಪ್ರಾಯ-42 ವರ್ಷ, ವೃತ್ತಿ-ಕ್ಷೌರಿಕ, ಸಾ|| ಗಾಂಧಿನಗರ, ತಾ: ಹೊನ್ನಾವರ ರವರು ದಿನಾಂಕ: 31-07-2021 ರಂದು 12-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

                      

ಮಂಕಿ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 103/2021, ಕಲಂ: 78(3) ಕರ್ನಾಟಕ ಪೊಲೀಸ್ ಎಕ್ಟ್ ನೇದ್ದರ ವಿವರ...... ನಮೂದಿತ ಆರೋಪಿತ ಸಂತೋಷ ತಂದೆ ನಾರಾಯಣ ನಾಯ್ಕ, ಪ್ರಾಯ-37 ವರ್ಷ, ವೃತ್ತಿ-ಕಲ್ಲು ಕ್ವಾರಿಯಲ್ಲಿ ಕೆಲಸ, ಸಾ|| ಮೂಲೆಮನೆ, ದೇವರಗದ್ದೆ, ಮಂಕಿ, ತಾ: ಹೊನ್ನಾವರ. ಈತನು ದಿನಾಂಕ: 31-07-2021 ರಂದು 17-30 ಗಂಟೆಗೆ ಮಂಕಿಯ ದೇವರಗದ್ದೆಯಲ್ಲಿರುವ ತನ್ನ ಗೂಡಂಗಡಿಯ ಪಕ್ಕದ ಸಾರ್ವಜನಿಕ ಸ್ಥಳದಲ್ಲಿ ನಿಂತುಕೊಂಡು ತನ್ನ ಲಾಭಕ್ಕಾಗಿ ಬರ-ಹೋಗುವ ಜನರಿಗೆ ಕೂಗಿ ಕರೆದು 01/- ರೂಪಾಯಿಗೆ 80/- ರೂಪಾಯಿ ಕೊಡುವುದಾಗಿ ಹೇಳಿ ಅವರಿಂದ ಹಣ ಪಡೆದು ಓ.ಸಿ ಮಟಕಾ ಜೂಗಾರಾಟದ ಅಂಕೆ-ಸಂಖ್ಯೆಗಳ ಮೇಲೆ ಹಣವನ್ನು ಪಂಥವಾಗಿ ಕಟ್ಟಿಸಿ, ಓ.ಸಿ ಮಟಕಾ ಜುಗರಾಟ ಆಡಿಸುತ್ತಿದ್ದಾಗ ದಾಳಿಯ ಸಮಯಕ್ಕೆ ಆರೋಪಿತನ ತಾಬಾದಲ್ಲಿ ಸಿಕ್ಕ ಒಟ್ಟೂ ನಗದು ಹಣ 2,100/- ರೂಪಾಯಿಗಳು, ಓ.ಸಿ. ಮಟಕಾ ಸಂಖ್ಯೆಗಳನ್ನು ಬರೆದ ಚೀಟಿ-1, ಬಾಲ್ ಪೆನ್-1 ನೇದವುಗಳೊಂದಿಗೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಅಶೋಕ ಮಾಳಾಬಗಿ, ಪಿ.ಎಸ್.ಐ (ಕಾ&ಸು), ಮಂಕಿ ಪೊಲೀಸ್ ಠಾಣೆ ರವರು ದಿನಾಂಕ: 31-07-2021 ರಂದು 20-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

                      

ಮುರ್ಡೇಶ್ವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 68/2021, ಕಲಂ: 394 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು ಯಾರೋ 3 ಜನ ಅಪರಿಚಿತರಾಗಿದ್ದು, ದಿನಾಂಕ: 30-07-2021 ರಂದು ರಾತ್ರಿ 23-45 ಗಂಟೆಗೆ ನಮೂದಿತ ಆರೋಪಿತರು ಒಂದು ಮೋಟಾರ್ ಸೈಕಲ್ ಮೇಲೆ ಬಂದು ಭಟ್ಕಳ ಶಿರಾಲಿ ಕಡೆಯಿಂದ ಮುರ್ಡೇಶ್ವರ ಬಸ್ತಿ ಕಡೆಯಿಂದ ಮುರ್ಡೇಶ್ವರ ಶಹರದ ಕಡೆಗೆ ಹೋದವರು, ಮರಳಿ ರಾಷ್ಟ್ರೀಯ ಹೆದ್ದಾರಿಯಿಂದ ಬಸ್ತಿ ಕಡೆಗೆ ಬಂದವರು, ತಮ್ಮ ಮೋಟಾರ್ ಸೈಕಲನ್ನು ಹೆದ್ದಾರಿಯ ಮೇಲೆ ನಿಲ್ಲಿಸಿದ್ದು, ಅದರಲ್ಲಿ ಒಬ್ಬನು ಪಿರ್ಯಾದಿಯ ಹತ್ತಿರ ಬಂದು ಹಿಂದಿ ಭಾಷೆಯಲ್ಲಿ ‘ಸಮಯ ಎಷ್ಟಾಗಿದೆ?’ ಅಂತಾ ಕೇಳಿದಾಗ ಪಿರ್ಯಾದಿಯು ಆ ವೇಳೆಯಲ್ಲಿ ಮೊಬೈಲಿನಲ್ಲಿ ತನ್ನ ಹೆಂಡತಿಯ ಜೊತೆ ಮಾತನಾಡುತ್ತಿದ್ದುದ್ದನ್ನು ಮುಗಿಸಿ, ಪಿರ್ಯಾದಿಯ ಮುಂದೆ ನಿಂತ 20-22 ವರ್ಷ ವಯಸ್ಸಿನ ಆರೋಪಿತ ವ್ಯಕ್ತಿಗೆ ಸಮಯ ಹೇಳುತ್ತಿದ್ದಂತೆ ಪಿರ್ಯಾದಿಯ ಕೈಯಲ್ಲಿದ್ದ ರೆಡ್ಮಿ ಕಂಪನಿಯ 9,500/- ರೂಪಾಯಿ ಬೆಲೆಯ ಮೊಬೈಲ್ ಸೆಟ್ ಅನ್ನು ಕಸಿದುಕೊಂಡು ಪಿರ್ಯಾದಿಯ ತಲೆಯ ಕೂದಲು ಹಿಡಿದು ನೆಲಕ್ಕೆ ಬಗ್ಗಿಸಿ, ಬೆನ್ನಿನ ಮೇಲೆ ಕಾಲಿನಿಂದ ಒದ್ದು, ಪಿರ್ಯಾದಿಯ ಮುಖದಲ್ಲಿ ಎಡಗೆನ್ನೆ ಮತ್ತು ಬಾಯಿ ಹಾಗೂ ಹಲ್ಲಿಗೆ ಗಾಯನೋವು ಪಡಿಸಿ, ತಾನು ಬಂದ ಮೋಟಾರ್ ಸೈಕಲ್ ಮೇಲೆ ಹತ್ತಿ ಪರಾರಿಯಾದ ಬಗ್ಗೆ ಪಿರ್ಯಾದಿ ಶ್ರೀ ದೇವೇಂದ್ರ ತಂದೆ ಜಟ್ಟಾ ನಾಯ್ಕ, ಪ್ರಾಯ-41 ವರ್ಷ, ವೃತ್ತಿ-ವ್ಯಾಪಾರ, ಸಾ|| ಜಾಲದಮನೆ, ಮಠದಹಿತ್ಲ, ಪೋ: ಕಾಯ್ಕಿಣಿ, ತಾ: ಭಟ್ಕಳ ರವರು ದಿನಾಂಕ: 31-07-2021 ರಂದು 17-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಯಲ್ಲಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 119/2021, ಕಲಂ: 454, 457, 380 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರಾದ ಯಾರೋ ಕಳ್ಳರು ದಿನಾಂಕ: 30-07-2021 ರಂದು 16-00 ಗಂಟೆಯಿಂದ ದಿನಾಂಕ: 31-07-2021 ರಂದು ಬೆಳಿಗ್ಗೆ 09-30 ಗಂಟೆಯ ನಡುವಿನ ಅವಧಿಯಲ್ಲಿ ಯಲ್ಲಾಪುರದ ಉಪಳೇಶ್ವರ ಗ್ರಾಮ ಪಂಚಾಯತ ವ್ಯಾಪ್ತಿಯ ಮಳಲಗಾಂವ ಅಂಗನವಾಡಿ ಕೇಂದ್ರದ ಬಾಗಿಲಿನ ಬೀಗದ ಕೊಂಡಿಯನ್ನು ಮೀಟಿ ತೆಗೆದು ಕೋಣೆಯಲ್ಲಿದ್ದ  ಸುಮಾರು 13,500/- ರೂಪಾಯಿ ಬೆಲೆಯ ಆಹಾರ ಸಾಮಗ್ರಿ ಹಾಗೂ ಅಡಿಗೆ ಪಾತ್ರೆಯನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಎಂಬ ಬಗ್ಗೆ ಪಿರ್ಯಾದಿ ಶ್ರೀಮತಿ ವಿಜಯಾ ಗೋಪಾಲ ಭಾಗ್ವತ, ಪ್ರಾಯ-36 ವರ್ಷ, ವೃತ್ತಿ-ಮಳಲಗಾಂವ ಅಂಗನವಾಡಿ ಕಾರ್ಯಕರ್ತೆ, ಸಾ|| ಮಳಲಗಾಂವ, ತಾ: ಯಲ್ಲಾಪುರ ರವರು ದಿನಾಂಕ: 31-07-2021 ರಂದು 15-10 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

                      

ಮುಂಡಗೋಡ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 101/2021, ಕಲಂ: 323, 341, 363, 392 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು ಯಾರೋ ನಾಲ್ಕು ಜನರು ಅಪರಿಚಿತಾಗಿದ್ದು, ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ. ಈ ನಮೂದಿತ ಆರೋಪಿತರು ದಿನಾಂಕ: 31-07-2021 ರಂದು ಬೆಳಿಗ್ಗೆ 10-40 ಗಂಟೆಯ ಸಮಯಕ್ಕೆ ನೋಂದಣಿ ಸಂಖ್ಯೆ ಕೆ.ಎ-10 ಅಥವಾ ಎಮ್.ಎಚ್-10 ಇರುವ ಬಿಳಿ ಬಣ್ಣದ ಬೊಲೆರೋ ವಾಹನದಲ್ಲಿ ಬಂದು ಪಿರ್ಯಾದಿಯು ಮುಂಡಗೋಡ ತಾಲೂಕಿನ ಕಾತೂರು ಗ್ರಾಮದಿಂದ 02 ಕಿ.ಮೀ ಹಿಂದೆ ತಲುಪಿ ತನ್ನ ವಾಹನ ನಂ: ಕೆ.ಎ-31/ಎ-9864 ನೇದನ್ನು ನಿಲ್ಲಿಸಿ ಮೂತ್ರ ವಿಸರ್ಜನೆ ಮಾಡಿಕೊಂಡು ತನ್ನ ವಾಹನದ ಹತ್ತಿರ ಹೋಗುತ್ತಿರುವಾಗ ಆರೋಪಿತರು ಪಿರ್ಯಾದಿಯನ್ನು ಅಡ್ಡಗಟ್ಟಿ ತಡೆದು ನಿಲ್ಲಿಸಿ ವಾಹನದಲ್ಲಿ ಹಾಕಿಕೊಂಡು ಕಣ್ಣಿಗೆ ಹಾಗೂ ಕೈಗೆ ಬಟ್ಟೆಯನ್ನು ಕಟ್ಟಿ, ಕೈಯಿಂದ ಮೈಮೇಲೆ ಹೊಡೆದು ಅಪಹರಣ ಮಾಡಿಕೊಂಡು ಹೋಗಿ ಪಿರ್ಯಾದಿಯ ಬಳಿಯಲ್ಲಿದ್ದ 22,000/- ರೂಪಾಯಿ ಹಣವನ್ನು ಕಿತ್ತುಕೊಂಡು ಹೋಗಿದ್ದು, ಪಿರ್ಯಾದಿಯು ‘ನನಗೆ ಅಪಹರಣ ಮಾಡಿದವರ ಪೈಕಿ ಮೂರು ಜನರನ್ನು ನೋಡಿದರೆ ಗುರುತಿಸುತ್ತೇನೆ. ಅವರೆಲ್ಲರೂ ಹಿಂದಿಯಲ್ಲಿ ಮಾತನಾಡುತ್ತಿದ್ದರು’ ಎಂಬ ಬಗ್ಗೆ ಪಿರ್ಯಾದಿ ಶ್ರೀ ಅಬ್ದುಲ್ ಫೀರಸಾಬ್ ತಂದೆ ಅಬ್ದುಲ್ ಅಜಿಂ ಶೇಖ್, ಪ್ರಾಯ-35 ವರ್ಷ, ವೃತ್ತಿ-ಚಾಲಕ, ಸಾ|| ಮಂಚಿಕೇರಿ, ತಾ: ಯಲ್ಲಾಪುರ ರವರು ದಿನಾಂಕ: 31-07-2021 ರಂದು 22-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

                      

ಹಳಿಯಾಳ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 133/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಸಮೀರ್ ತಂದೆ ಮೆಹಬೂಬ್ ನದಾಫ್, ಪ್ರಾಯ-24 ವರ್ಷ, ವೃತ್ತಿ-ವ್ಯಾಪಾರ, ಸಾ|| ಕೊಲ್ಲಾಪುರ, ಮಹಾರಾಷ್ಟ್ರ (ಕಾರ್ ನಂ: ಎಮ್.ಎಚ್-12/ಎಚ್.ಎಲ್-6244 ನೇದರ ಚಾಲಕ). ಈತನು ದಿನಾಂಕ: 31-07-2021 ರಂದು ಮದ್ಯಾಹ್ನ 14-00 ಗಂಟೆಗೆ ತಾನು ಚಲಾಯಿಸುತ್ತಿದ್ದ ಕಾರ್ ನಂ: ಎಮ್.ಎಚ್-12/ಎಚ್.ಎಲ್-6244 ನೇದನ್ನು ತತ್ವಣಗಿ ಬದಿಯಿಂದ ಹಳಿಯಾಳ ಕಡೆಗೆ ಹೋಗಲು ಅತೀವೇಗವಾಗಿ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಎದುರಿನಿಂದ ಅಂದರೆ ಹಳಿಯಾಳ ಕಡೆಯಿಂದ ತತ್ವಣಗಿ ಕಡೆಗೆ ಹೋಗುತ್ತಿದ್ದ ಪಿರ್ಯಾದಿಯವರು ಹಿಂದೆ ಕುಳಿತು ಸವಾರಿ ಮಾಡುವ ಮೋಟಾರ್ ಸೈಕಲ್ ನಂ: ಕೆ.ಎ-31/ವ್ಹಾಯ್-1183 ನೇದಕ್ಕೆ ಮುಂದಿನಿಂದ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಮೋಟಾರ್ ಸೈಕಲ್ ಮೇಲೆ ಹಿಂದೆ ಕುಳಿತ ಪಿರ್ಯಾದಿಗೆ ಬಲಗಾಲ ಹಿಮ್ಮಡಿ ಹತ್ತಿರ, ಬಲಗೈ ಅಂಗೈ ಮೇಲೆ ಹಾಗೂ ಮೋಟಾರ್ ಸೈಕಲ್ ಚಾಲನೆ ಮಾಡುತ್ತಿದ್ದ ರಹೀಮ್ ಹಜರತ್ ಸಾಬ್ ಜಂಡೇವಾಲೆ ಈತನಿಗೆ ಬಲಗಾಲ ಮೊಣಕಾಲ ಕೆಳಗೆ, ಬಲಗಾಲ ಬೆರಳಿಗೆ ಹಾಗೂ ಎಡಗಾಲ ಪಾದದ ಮೇಲಿನ ಗಂಟಿಗೆ ರಕ್ತದ ಗಾಯನೋವನ್ನು ಪಡಿಸಿದ್ದಲ್ಲದೇ, ಆರೋಪಿ ಚಾಲಕನು ಮೋಟಾರ್ ಸೈಕಲ್ ಮುಂದಿನ ಭಾಗವನ್ನು ಜಖಂಗೊಳಿಸಿದ್ದು ಹಾಗೂ ತನ್ನ ಕಾರಿನ ಬಲಬದಿಯ ಮುಂಭಾಗವನ್ನು ಜಖಂಗೊಳಿಸಿಕೊಂಡ ಬಗ್ಗೆ ಪಿರ್ಯಾದಿ ಶ್ರೀ ಮೌಲಾಲಿ ತಂದೆ ಹಸನ್ ಸಾಬ್, ಪ್ರಾಯ-38 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಹಳ್ಳಿಗದ್ದೆ, ಪೋ: ಕಂಪ್ಲಿ, ತಾ: ಯಲ್ಲಾಪುರ ರವರು ದಿನಾಂಕ: 31-07-2021 ರಂದು 16-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 31-07-2021

at 00:00 hrs to 24:00 hrs

 

ಕಾರವಾರ ಗ್ರಾಮೀಣ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 11/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ಕೆ. ವೆಂಕಟೇಶ ತಂದೆ ರಾಮಲು, ಪ್ರಾಯ-35 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಲೊಕ್ರೇವ್ ಗ್ರಾಮ, ನವಾಬಪೇಟ್ ಮಂಡಲ, ಮೆಹಬೂಬ್ ನಗರ, ತೆಲಂಗಾಣ ರಾಜ್ಯ, ಹಾಲಿ ಸಾ|| ಎನ್.ಸಿ.ಸಿ ಲೇಬರ್ ಕಾಲೋನಿ, ಮುದಗಾ, ಕಾರವಾರ. ಈತನು ಪಿರ್ಯಾದಿಯ ಗಂಡನಾಗಿದ್ದು, ಕಾರವಾರ ಮುದಗಾದ ನಾಗಾರ್ಜುನ ಕನ್ಸಟ್ರಕ್ಷನ್ ಕಂಪನಿಯಲ್ಲಿ ಕೂಲಿ ಕೆಲಸವನ್ನು ಮಾಡಿಕೊಂಡು ತನ್ನ ಹೆಂಡತಿ ಮಕ್ಕಳೊಂದಿಗೆ ಮುದಗಾದ ಲೇಬರ್ ಕಾಲೋನಿಯಲ್ಲಿ ವಾಸ್ತವ್ಯ ಮಾಡಿಕೊಂಡಿದ್ದನು, ದಿನಾಂಕ: 29-07-2021 ರಂದು ರಾತ್ರಿ ಸುಮಾರು 10-00 ಗಂಟೆಯ ಸಮಯಕ್ಕೆ ತನ್ನ ಮಗನಿಗೆ ಕೈಯಿಂದ ಹೊಡೆದ ವಿಷಯದ ಕುರಿತು ಗಂಡ ಹೆಂಡತಿಯರಲ್ಲಿ ಜಗಳವಾಗಿ ಮೃತನು ಮನಸ್ಸಿಗೆ ಬೇಜಾರು ಮಾಡಿಕೊಂಡು ಇದ್ದವನು, ದಿನಾಂಕ: 30-07-2021 ರಂದು ರಾತ್ರಿ 10-00 ಗಂಟೆಗೆ ಮನೆಯಲ್ಲಿ ಮಲಗಿದ್ದಲ್ಲಿಂದ ಎದ್ದು ಹೋದವನು, ದಿನಾಂಕ: 31-07-2021 ರಂದು ಬೆಳಗಿನ 06-15 ಗಂಟೆಯ ನಡುವಿನ ಅವಧಿಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ಉದ್ದೇಶದಿಂದ ಮುದಗಾದ ರೇಲ್ವೆ ಹಳಿಯ ಮೇಲೆ ನಡೆದುಕೊಂಡು ಹೋದವನಿಗೆ ಚಲಿಸುವ ರೇಲ್ವೆ ಬಡಿದು, ಆತನ ತಲೆಗೆ ಆಳವಾದ ಗಾಯವಾಗಿ ಹಾಗೂ ಬಲಗೈಗೆ ಮುರಿದು ತೀವೃ ಸ್ವರೂಪದ ಗಾಯನೋವಿನಿಂದ ಮರಣಪಟ್ಟ ಬಗ್ಗೆ ಪಿರ್ಯಾದಿ ಶ್ರೀಮತಿ ಲಾವಣ್ಯ ಕೋಂ. ಕೆ. ವೆಂಕಟೇಶ, ಪ್ರಾಯ-28 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಲೊಕ್ರೇವ್ ಗ್ರಾಮ, ನವಾಬಪೇಟ್ ಮಂಡಲ, ಮೆಹಬೂಬ್ ನಗರ, ತೆಲಂಗಾಣ ರಾಜ್ಯ, ಹಾಲಿ ಸಾ|| ಎನ್.ಸಿ.ಸಿ ಲೇಬರ್ ಕಾಲೋನಿ, ಮುದಗಾ, ಕಾರವಾರ ರವರು ದಿನಾಂಕ: 31-07-2021 ರಂದು 07-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಯಲ್ಲಾಪುರ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 24/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ಆನಂದ ತಂದೆ ನಾಗಾ ಮೊಗೇರ, ಪ್ರಾಯ-43 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಕಬ್ಬಿನಗದ್ದೆ, ಆಲವಾಡ ಗ್ರಾಮ, ತಾ: ಯಲ್ಲಾಪುರ. ಪಿರ್ಯಾದಿಯವರ ತಮ್ಮನಾದ ಈತನು ದಿನಾಂಕ: 23-07-2021 ರಂದು 17-30 ಗಂಟೆಯ ಸುಮಾರಿಗೆ ಕೂಲಿ ಕೆಲಸಕ್ಕೆ ಹೋದವನು, ವಾಪಸ್ ಮನೆಗೆ ಹೋಗುತ್ತಿರುವಾಗ ಯಲ್ಲಾಪುರ ತಾಲೂಕಿನ ಆಲವಾಡ ಗ್ರಾಮದ ಕಬ್ಬಿನಗದ್ದೆ ಊರಿನ ತನ್ನ ಮನೆಯ ಹತ್ತಿರ ಇರುವ ಹಳ್ಳದ ಬ್ರಿಡ್ಜ್ ದಾಟುವಾಗ ವಿಪರೀತವಾಗಿ ಮಳೆ ಸುರಿದ ಪರಿಣಾಮ ಮಳೆಯ ನೀರು ಹಳ್ಳದಲ್ಲಿ ಹರಿದು ಬಂದಿದ್ದರಿಂದ ನೀರಿನ ರಭಸಕ್ಕೆ ಕೊಚ್ಚಿ ಹೋಗಿ ನೀರಿನಲ್ಲಿ ಮುಳುಗಿ ಮೃತಪಟ್ಟವನ ಶವವು ದಿನಾಂಕ: 31-07-2021 ರಂದು 11-30 ಗಂಟೆಯ ಸುಮಾರಿಗೆ ಯಲ್ಲಾಪುರ ತಾಲೂಕಿನ ಕೆರೆಹೊಸಳ್ಳಿ ಊರಿನ ಹಳ್ಳದಲ್ಲಿ ದೂರೆತಿರುತ್ತದೆ. ಈ ಕುರಿತು ಮುಂದಿನ ಕಾನೂನು ಕ್ರಮ ಕೈಗೊಳ್ಳಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ಮಾಬ್ಲಾ ತಂದೆ ನಾಗಾ ಮೊಗೇರ, ಪ್ರಾಯ-60 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಕಬ್ಬಿನಗದ್ದೆ, ಆಲವಾಡ ಗ್ರಾಮ, ತಾ: ಯಲ್ಲಾಪುರ ರವರು ದಿನಾಂಕ: 31-07-2021 ರಂದು 14-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಹಳಿಯಾಳ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 19/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ಪರಶುರಾಮ ತಂದೆ ಗುಂಡು ಹೊನಗೇಕರ, ಪ್ರಾಯ-45 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ಅಂತ್ರೋಳ್ಳಿ, ತಾ: ಹಳಿಯಾಳ. ಪಿರ್ಯಾದಿಯವರ ಗಂಡನಾದ ಈತನು ಹಳಿಯಾಳ ತಾಲೂಕಿನ ಅಂತ್ರೋಳ್ಳಿ ಗ್ರಾಮದಲ್ಲಿರುವ ತಮ್ಮ ಮನೆತನದ ಬಾಬ್ತು ಸರ್ವೇ ನಂ: 18/1 ಅ ರಲ್ಲಿರುವ 2 ಎಕರೆ 19 ಗುಂಟೆ ಮತ್ತು ಸರ್ವೇ ನಂ: 9/1ಬ ರಲ್ಲಿರುವ 01 ಎಕರೆ ಜಮೀನ ಸಲುವಾಗಿ ಹಳಿಯಾಳ ತಾಲೂಕಿನ ತೇರಗಾವ ಗ್ರಾಮದ ಕಾಮಧೇನು ಸೇವಾ ಸಹಕಾರಿ ಸಂಘದಲ್ಲಿ 4,26,000/- ರೂಪಾಯಿ ಕೃಷಿ ಸಾಲ ಪಡೆದುಕೊಂಡಿದ್ದು, ಕಳೆದ 3 ವರ್ಷದಿಂದ ಹೊಲದಲ್ಲಿ ಬೆಳೆ ಸರಿಯಾಗಿ ಬಾರದೇ ಮಾಡಿದ ಸಾಲವನ್ನು ಹೇಗೆ ತೀರಿಸುವುದು ಅಂತಾ ಯಾವಾಗಲೂ ಚಿಂತೆ ಮಾಡುತ್ತಿದ್ದವನು, ಅದನ್ನೇ ಮನಸ್ಸಿಗೆ ಹಚ್ಚಿಕೊಂಡು ದಿನಾಂಕ: 31-07-2021 ರಂದು ಬೆಳಿಗ್ಗೆ 05-00 ಗಂಟೆಯಿಂದ 06-30 ಗಂಟೆಯ ನಡುವಿನ ಅವಧಿಯಲ್ಲಿ ಹಳಿಯಾಳ ತಾಲೂಕಿನ ಅಂತ್ರೋಳ್ಳಿ ಗ್ರಾಮದಲ್ಲಿರುವ ತನ್ನ ಹೊಲದ ದನದ ಮನೆಯಲ್ಲಿ ಕಟ್ಟಿಗೆಯ ತೊಲೆಗೆ ನೂಲ ಹಗ್ಗದಿಂದ ಉರುಳು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾನೆಯೇ ಹೊರತು ಅತನ ಮರಣದಲ್ಲಿ ಬೇರೇ ಯಾವುದೇ ಸಂಶಯ ಇರುವುದಿಲ್ಲ ಎಂಬ ಬಗ್ಗೆ ಪಿರ್ಯಾದಿ ಶ್ರೀಮತಿ ಲಕ್ಷ್ಮೀ ಕೋಂ. ಪರಶುರಾಮ್ ಹೊನಗೇಕರ, ಪ್ರಾಯ-38 ವರ್ಷ, ವೃತ್ತಿ-ಮನೆ ಕೆಲಸ, ಸಾ|| ಅಂತ್ರೋಳ್ಳಿ, ತಾ: ಹಳಿಯಾಳ ರವರು ದಿನಾಂಕ: 31-07-2021 ರಂದು 09-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

ಇತ್ತೀಚಿನ ನವೀಕರಣ​ : 02-08-2021 04:25 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080