ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 31-03-2021

at 00:00 hrs to 24:00 hrs

 

ಕದ್ರಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 07/2021, ಕಲಂ: 279 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಅಮೀತ ತಂದೆ ಮಾರುತಿ ಪಡುವಳ್ಸರ್, ಪ್ರಾಯ-31 ವರ್ಷ, ಸಾ|| ಗೋಟೆಗಾಳಿ, ಕಾರವಾರ (ಕಾರ್ ನಂ: ಜಿ.ಎ-10/ಎ-2561 ನೇದರ ಚಾಲಕ). ನಮೂದಿತ ಆರೋಪಿತನು ದಿನಾಂಕ: 28-03-2021 ರಂದು ಸಾಯಂಕಾಲ 06-30 ಗಂಟೆಗೆ ತನ್ನ ಕಾರ್ ನಂ: ಜಿ.ಎ-10/ಎ-2561 ನೇದನ್ನು ಗೋಟೆಗಾಳಿ ಕಡೆಯಿಂದ ಕದ್ರಾ ಕಡೆಗೆ ಅತೀವೇಗವಾಗಿ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ರಸ್ತೆಗೆ ಅಡ್ಡ ಬಂದ ದನಗಳನ್ನು ತಪ್ಪಿಸಲು ಒಮ್ಮೇಲೆ ಬ್ರೇಕ್ ಹಾಕಿದ ಪರಿಣಾಮ ವಾಹನ ನಿಯಂತ್ರಣಕ್ಕೆ ಸಿಗದೇ ಪಿರ್ಯಾದಿಯ ಅಂಗಡಿಯ ಎದುರಿಗೆ ಇದ್ದ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಪಲ್ಟಿ ಕೆಡವಿ ಕಾರನ್ನು ಜಖಂಗೊಳಿಸಿದ ಬಗ್ಗೆ ಪಿರ್ಯಾದಿ ಶ್ರೀ ರವಿ ತಂದೆ ಉತ್ತಮ ಕೋತ್, ಪ್ರಾಯ-34 ವರ್ಷ, ವೃತ್ತಿ-ಫಿಟ್ಟರ್ ಕೆಲಸ, ಸಾ|| ಗೋಟೆಗಾಳಿ, ಕಾರವಾರ ರವರು ದಿನಾಂಕ: 31-03-2021 ರಂದು 15-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಕುಮಟಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 76/2021, ಕಲಂ: ಗಂಡಸು ಕಾಣೆ ನೇದ್ದರ ವಿವರ...... ನಮೂದಿತ ಕಾಣೆಯಾದ ಗಂಡಸು ಶ್ರೀ ಮಂಜುನಾಥ ತಂದೆ ಗೋಯ್ದು ಮುಕ್ರಿ, ಪ್ರಾಯ-26 ವರ್ಷ, ವೃತ್ತಿ-ಸ್ಟೀಲ್ ಅಂಗಡಿ ಕೆಲಸ, ಸಾ|| ಹಂದಿಗೋಣ, ತಾ: ಕುಮಟಾ. ನಮೂದಿತ ಕಾಣೆಯಾದವನು ಪಿರ್ಯಾದಿಯ ಗಂಡನಾಗಿದ್ದು, ಈತನು ಕಳೆದ 5 ವರ್ಷಗಳಿಂದ ಪಿರ್ಯಾದಿಯನ್ನು ಪ್ರೀತಿಸಿ ಒಂದುವರೆ ವರ್ಷದ ಹಿಂದೆ ಮದುವೆಯಾಗಿ ಒಂದು ಗಂಡು ಮಗು ಇದ್ದು, ಮದುವೆಯಾದ ನಂತರ ಗಂಡ-ಹೆಂಡತಿಯರಲ್ಲಿ ಸಾಂಸಾರಿಕ ವಿಷಯದಲ್ಲಿ ಆಗಾಗ ಜಗಳ ನಡೆಯುತ್ತಿದ್ದು, ದಿನಾಂಕ: 30-03-2021 ರಂದು ಬೆಳಿಗ್ಗೆ 07-00 ಗಂಟೆಗೆ ಹೆಂಡತಿಯೊಂದಿಗೆ ಜಗಳವಾಡಿ ತಾನು ಕೆಲಸಕ್ಕೆ ಹೋಗುವುದಾಗಿ ಹೇಳಿ ಮನೆ ಬಿಟ್ಟು ಹೋದವನು, ಈವರೆಗೂ ಪೋನ್ ಮಾಡದೇ ಮರಳಿ ಮನೆಗೂ ಬಾರದೇ ಹಾಗೂ ಸಂಬಂಧಿಕರ ಮನೆಗೂ ಹೋಗದೇ, ಎಲ್ಲಿಯೋ ಹೋಗಿ ಕಾಣೆಯಾಗಿದ್ದು, ಕಾಣೆಯಾದ ತನ್ನ ಗಂಡನನ್ನು ಹುಡುಕಿಕೊಡಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀಮತಿ ಜ್ಯೋತಿ ಮಂಜುನಾಥ ಮುಕ್ರಿ, ಪ್ರಾಯ-26 ವರ್ಷ, ವೃತ್ತಿ-ಮನೆ ಕೆಲಸ, ಸಾ|| ಹಂದಿಗೋಣ, ತಾ: ಕುಮಟಾ ರವರು ದಿನಾಂಕ: 31-03-2021 ರಂದು 13-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹೊನ್ನಾವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 91/2021, ಕಲಂ: 379 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ರಾಘು @ ರಾಘವೇಂದ್ರ ತಂದೆ ನಾರಾಯಣ ಗೌಡ, ಪ್ರಾಯ-37 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ನಿರ್ವತ್ತಿಕೊಡ್ಲು, ಕವಲಕ್ಕಿ, ಹಾಲಿ ಸಾ|| ಮಲಬಾರಕೇರಿ, ಕಾಸರಕೋಡ, ತಾ: ಹೊನ್ನಾವರ. ನಮೂದಿತ ಆರೋಪಿತನು ದಿನಾಂಕ: 31-03-2021 ರಂದು 04-00 ಗಂಟೆಯಿಂದ 04-30 ಗಂಟೆಯ ನಡುವಿನ ಅವಧಿಯಲ್ಲಿ ಹೊನ್ನಾವರ ತಾಲೂಕಿನ ಹಡಿನಬಾಳ ಮಕ್ಕಿಕೇರಿಯಲ್ಲಿ ಪಿರ್ಯಾದಿಯವರಿಗೆ ಸಂಬಂಧಿಸಿದ ತೋಟದಲ್ಲಿ ಬೆಳೆದಿರುವ ಅಡಿಕೆ ಮರಗಳ ಮೇಲೆ ಹತ್ತಿ ಮರದ ಮೇಲಿದ್ದ ಅಡಿಕೆ ಸಿಂಗಾರಗಳನ್ನು ಕಳುವು ಮಾಡುತ್ತಿರುವಾಗ ಪಿರ್ಯಾದಿ ಹಾಗೂ ಪಿರ್ಯಾದಿಗೆ ಸಂಬಂಧಿಸಿದ ಜನರಿಗೆ ಸಿಕ್ಕಿದ್ದು, ಅಲ್ಲದೇ ಈ ಹಿಂದೆ ಸಹ ದಿನಾಂಕ: 06-01-2021 ರಿಂದ ಈವರೆಗೆ ಪಿರ್ಯಾದಿ ಹಾಗೂ ಸುತ್ತಮುತ್ತಲಿನ ತೋಟದಲ್ಲಿಯ ಸುಮಾರು 1,20,000/- ರೂಪಾಯಿ ಮೌಲ್ಯದ ಅಡಿಕೆ ಹಾಗೂ ಅಡಿಕೆ ಸಿಂಗಾರಗಳನ್ನು ಕಳುವು ಮಾಡಿದ ಬಗ್ಗೆ ಪಿರ್ಯಾದಿ ಶ್ರೀ ಈಶ್ವರ ಗಣಪತಿ ಭಟ್ಟ, ಪ್ರಾಯ-49 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಕಬ್ಬಿನಗದ್ದೆ, ಹಡಿನಬಾಳ, ತಾ: ಹೊನ್ನಾವರ ರವರು ದಿನಾಂಕ: 31-03-2021 ರಂದು 08-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹೊನ್ನಾವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 93/2021, ಕಲಂ: 323, 324, 341, 504, 506 ಸಹಿತ 34 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ಶಿವಾನಂದ ದೇವಾ ಮಡಿವಾಳ, ಪ್ರಾಯ-65 ವರ್ಷ, ವೃತ್ತಿ-ಕೃಷಿ ಕೆಲಸ, 2]. ಪ್ರಶಾಂತ ಶಿವಾನಂದ ಮಡಿವಾಳ, ಪ್ರಾಯ-32 ವರ್ಷ, ವೃತ್ತಿ-ಕಿರಾಣಿ ಅಂಗಡಿ, 3]. ವಿನಾಯಕ ಶಿವಾನಂದ ಮಡಿವಾಳ, ಪ್ರಾಯ-28 ವರ್ಷ, ವೃತ್ತಿ- ಕೃಷಿ ಕೆಲಸ, ಸಾ|| (ಎಲ್ಲರೂ) ಗೋಡೆಕೇರಿ, ಹೆಬ್ಬಾನಕೇರಿ, ಕಡ್ಲೆ, ತಾ: ಹೊನ್ನಾವರ. ಈ ನಮೂದಿತ ಆರೋಪಿತರು ಪಿರ್ಯಾದಿಯ ಅಣ್ಣ ಮತ್ತು ಅಣ್ಣನ ಮಕ್ಕಳಿದ್ದು, ಪಿರ್ಯಾದಿಯ ಜಾಗದಲ್ಲಿ ಇರುವ ಬಾವಿಯ ವಿಚಾರವಾಗಿ ಆರೋಪಿತರು ಈ ಹಿಂದಿನಿಂದಲು ಪಿರ್ಯಾದಿಯೊಂದಿಗೆ ತಂಟೆ-ತಕರಾರು ಮಾಡಿಕೊಂಡು ಬಂದವರು, ದಿನಾಂಕ: 31-03-2021 ರಂದು ಸಾಯಂಕಾಲ 16-30 ಗಂಟೆಯ ಸುಮಾರಿಗೆ ಪಿರ್ಯಾದಿಗೆ ಸಂಬಂಧಿಸಿದ ಜಾಗದಲ್ಲಿ ಇರುವ ಬಾವಿಗೆ ಆರೋಪಿತರು ಮೋಟಾರ್ ಬಿಡಲು ಬಂದಾಗ ಪಿರ್ಯಾದಿಯು ವಿಚಾರಿಸಲು ಹೋಗಿದ್ದು, ಆಗ ಆರೋಪಿ 1 ನೇಯವನು ಪಿರ್ಯಾದಿಯನ್ನು ಅಡ್ಡಗಟ್ಟಿ ತಡೆದು ‘ಬೋಳಿ ಮಗನೇ, ಮುಂದೆ ಬರಬೇಡ. ಬಂದರೆ ನಿನ್ನನ್ನು ಕೊಚ್ಚಿ ಹಾಕುತ್ತೇನೆ’ ಅಂತಾ ಹೇಳಿದ್ದು, ಆಗ ಪಿರ್ಯಾದಿಯು ‘ಈ ಜಾಗ ಇನ್ನು ತಕರಾರಿನಲ್ಲಿ ಇದ್ದು, ತಕರಾರು ಬಗೆ ಹರಿದ ನಂತರ ಮೋಟಾರ್ ಬಿಡು’ ಎಂದು ಹೇಳಿದ್ದಕ್ಕೆ ಸಿಟ್ಟಾದ ಆರೋಪಿ 1 ಮತ್ತು 2 ನೇಯವರು ಅಲ್ಲಿಯೇ ಬಿದ್ದಿದ್ದ ಕಟ್ಟಿಗೆಯ ಬಡಿಗೆಯಿಂದ ಪಿರ್ಯಾದಿಗೆ ಮೈ ಮೇಲೆ ಹೊಡೆದಿದ್ದು, ಆಗ ಅಲ್ಲಿಯೇ ಇದ್ದ ಆರೋಪಿ 3 ನೇಯವನು ಪಿರ್ಯಾದಿಗೆ ‘ನಿನ್ನ ಕಥೆ ಇವತ್ತು ಮುಗಿಸಿ ಬಿಡುತ್ತೇನೆ’ ಅಂತಾ ಹೇಳಿ ತನ್ನ ಕೈಯಲ್ಲಿದ್ದ ಕತ್ತಿಯಿಂದ ಪಿರ್ಯಾದಿಯ ತಲೆಗೆ ಹೊಡೆದು ಗಾಯನೋವು ಪಡಿಸಿದ್ದು ಇರುತ್ತದೆ. ಆಗ ಪಿರ್ಯಾದಿಯು ಕೂಗಿಕೊಂಡಾಗ ಊರ ಜನರು ಮತ್ತು ಮನೆಯವರು ಬರುವುದನ್ನು ನೋಡಿ ಆರೋಪಿತರೆಲ್ಲರೂ ಸೇರಿ ಪಿರ್ಯಾದಿಗೆ ‘ಈ ದಿನ ಇಷ್ಟಕ್ಕೆ ಬಿಟ್ಟು ಹೋಗುತ್ತಿದ್ದೇವೆ. ಇನ್ನೊಂದು ಸಾರಿ ನಮ್ಮ ತಂಟೆಗೆ ಬಂದರೆ ನಿನ್ನನ್ನು ಮತ್ತು ನಿನ್ನ ಕುಟುಂಬದವರನ್ನು ಕೊಚ್ಚಿ ಕೊಂದು ಹಾಕುತ್ತೇವೆ’ ಅಂತಾ ಜೀವದ ಬೆದರಿಕೆ ಹಾಕಿ ಹೋದ ಬಗ್ಗೆ ಪಿರ್ಯಾದಿ ಶ್ರೀ ಗಣಪತಿ ತಂದೆ ದೇವಾ ಮಡಿವಾಳ, ಪ್ರಾಯ-62 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಗೋಡೆಕೇರಿ, ಹೆಬ್ಬಾನಕೇರಿ, ಕಡ್ಲೆ, ತಾ: ಹೊನ್ನಾವರ ರವರು ದಿನಾಂಕ: 31-03-2021 ರಂದು 18-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಮುರ್ಡೇಶ್ವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 0357/2021, ಕಲಂ: 78(3) ಕರ್ನಾಟಕ ಪೊಲೀಸ್ ಕಾಯ್ದೆ-1963 ನೇದ್ದರ ವಿವರ...... ನಮೂದಿತ ಆರೋಪಿತ ಗಣೇಶ ತಂದೆ ಮಾಸ್ತಿ ದೇವಾಡಿಗ, ಪ್ರಾಯ-23 ವರ್ಷ, ವೃತ್ತಿ-ಬೀಡಾ ಅಂಗಡಿ ವ್ಯಾಪಾರ, ಸಾ|| ಮೋಳಯ್ಯನಮನೆ, ಮಾವಿನಕಟ್ಟಾ, ಶಿರಾಲಿ, ತಾ: ಭಟ್ಕಳ. ನಮೂದಿತ ಆರೋಪಿತನು ದಿನಾಂಕ: 31-03-2021 ರಂದು 12-45 ಗಂಟೆಗೆ ಮಾವಿನಕಟ್ಟಾ ಚಿಟ್ಟೆಹಕ್ಲಿನ ತನ್ನ ಬೀಡಾ ಅಂಗಡಿಯ ಎದುರಿನ ಸಾರ್ವಜನಿಕ ಸ್ಥಳದಲ್ಲಿ ತನ್ನ ಲಾಭಕ್ಕೋಸ್ಕರ ಬರ-ಹೋಗುವ ಜನರನ್ನು ಸೇರಿಸಿಕೊಂಡು ಓ.ಸಿ ಮಟಕಾ ಜೂಗಾರಾಟ ನಡೆಸುತ್ತಿರುವಾಗ ಪಿರ್ಯಾದಿಯವರು ಸಿಬ್ಬಂದಿಗಳೊಂದಿಗೆ ಸೇರಿ ದಾಳಿ ನಡೆಸಿದ ಕಾಲಕ್ಕೆ ಓ.ಸಿ ಮಟಕಾ ಜೂಗಾರಾಟದ ಸಲಕರಣೆಗಳಾದ ನಗದು ಹಣ 780/- ರೂಪಾಯಿ, ಅಂಕೆ-ಸಂಖ್ಯೆ ಬರೆದ ಚೀಟಿ-01 ಹಾಗೂ ಬಾಲ್ ಪೆನ್-01 ನೇದವುಗಳೊಂದಿಗೆ ಆರೋಪಿತನು ಸೆರೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ರವೀಂದ್ರ ಬಿರಾದಾರ, ಪಿ.ಎಸ್.ಐ (ಕಾ&ಸು), ಮುರ್ಡೇಶ್ವರ ಪೊಲೀಸ್ ಠಾಣೆ ರವರು ದಿನಾಂಕ: 31-03-2021 ರಂದು 14-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 45/2021, ಕಲಂ: 78(3) ಕರ್ನಾಟಕ ಪೊಲೀಸ್ ಕಾಯ್ದೆ-1963 ನೇದ್ದರ ವಿವರ...... ನಮೂದಿತ ಆರೋಪಿತ ಭಾಸ್ಕರ ತಂದೆ ಶ್ರೀಧರ ನಾಯ್ಕ, ಪ್ರಾಯ-36 ವರ್ಷ, ವೃತ್ತಿ-ಕಾರ್ಪೆಂಟರ್, ಸಾ|| ತಲಾಂದ ಶಾಲೆಯ ಹಿಂಭಾಗದಲ್ಲಿ, ತಾ: ಭಟ್ಕಳ. ನಮೂದಿತ ಆರೋಪಿತನು ದಿನಾಂಕ: 31-03-2021 ರಂದು 10-30 ಗಂಟೆಯ ಸಮಯಕ್ಕೆ ಹೆಬಳೆ ಗಾಂಧಿನಗರದ ಸರ್ಕಲ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ತನ್ನ ಲಾಭಕ್ಕೋಸ್ಕರ 01/- ರೂಪಾಯಿಗೆ 70/- ರೂಪಾಯಿ ಕೊಡುವ ಶರತ್ತಿನ ಮೇಲೆ ಸಾರ್ವಜನಿಕರಿಂದ ಹಣ ಪಡೆದು ಅಂಕೆ-ಸಂಖ್ಯೆಗಳ ಮೇಲೆ ಹಣದ ಪಂಥ ಕಟ್ಟಿಸಿ ಓ.ಸಿ ಜುಗಾರಾಟ ನಡೆಸುತ್ತಿದ್ದಾಗ ಪಿರ್ಯಾಯವರು ಸಿಬ್ಬಂದಿಗಳೊಂದಿಗೆ ಸೇರಿ ದಾಳಿ ನಡೆಸಿದ ಕಾಲಕ್ಕೆ ಓ.ಸಿ ಚೀಟಿ-01, ಬಾಲ್ ಪೆನ್-01 ಹಾಗೂ ನಗದು ಹಣ 780/- ರೂಪಾಯಿಯೊಂದಿಗೆ ಆರೋಪಿತನು ಸ್ಥಳದಲ್ಲಿ ಸೆರೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಎಚ್. ಓಂಕಾರಪ್ಪ, ಪಿ.ಎಸ್.ಐ (ಕ್ರೈಂ), ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ ರವರು ದಿನಾಂಕ: 31-03-2021 ರಂದು 13-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಜೋಯಿಡಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 21/2021, ಕಲಂ: 279, 304(ಎ) ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಪ್ರಶಾಂತ ತಂದೆ ಮಧುಕರ ಮಿರಾಶಿ, ಪ್ರಾಯ-21 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ವಡಾಕಡೆ, ತಾ: ಜೋಯಿಡಾ (ಮೋಟಾರ್ ಸೈಕಲ್ ನಂ: ಕೆ.ಎ-65/ಇ-4081 ನೇದರ ಸವಾರ). ನಮೂದಿತ ಆರೋಪಿತನು ದಿನಾಂಕ: 31-03-2021 ರಂದು 11-45 ಗಂಟೆಯ ಸುಮಾರಿಗೆ ತನ್ನ ಮೋಟಾರ್ ಸೈಕಲ್ ನಂ: ಕೆ.ಎ-65/ಇ-4081 ನೇದನ್ನು ಸವಾರಿ ಮಾಡಿಕೊಂಡು ಸದರ ಮೋಟಾರ್ ಸೈಕಲ್ ಹಿಂಬದಿಯಲ್ಲಿ ಶ್ರೀಮತಿ ಸೀತಾಬಾಯಿ ಕೋಂ. ರಾಮಾ ಮಿರಾಶಿ ಇವರನ್ನು ಕೂರಿಕೊಂಡು ಜೋಯಿಡಾದಿಂದ ವಡಾಕಡೆ ಗ್ರಾಮಕ್ಕೆ ಹೋಗುತ್ತಿರುವಾಗ ಸದರ ಮೋಟಾರ್ ಸೈಕಲನ್ನು ಅತೀವೇಗವಾಗಿ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ದಿಗಲಂಬಾ ಬಸ್ ನಿಲ್ದಾಣದ ಹತ್ತಿರ ಸದರ ಮೋಟಾರ್ ಸೈಕಲಿನಿಂದ ಶ್ರೀಮತಿ ಸೀತಾಬಾಯಿಯನ್ನು ಡಾಂಬರ್ ರಸ್ತೆಯಲ್ಲಿ ಕೆಡವಿ ಅಪಘಾತ ಪಡಿಸಿ, ಭಾರೀ ಗಾಯ ಪಡಿಸಿದ್ದರಿಂದ ಗಾಯಾಳು ಶ್ರೀಮತಿ ಸೀತಾಬಾಯಿ ಇವರನ್ನು ಉಪಚಾರಕ್ಕಾಗಿ ಜೋಯಿಡಾದ ತಾಲೂಕಾ ಆಸ್ಪತ್ರೆಯಲ್ಲಿ ದಾಖಲಿಸಿದಾಗ ವೈದ್ಯಾಧಿಕಾರಿಗಳು ಶ್ರೀಮತಿ ಸೀತಾಬಾಯಿ ಮೃತಪಟ್ಟಿರುತ್ತಾಳೆ ಅಂತಾ ತಿಳಿಸಿರುತ್ತಾರೆ. ಕಾರಣ ಸದರ ಮೋಟಾರ್ ಸೈಕಲ್ ನಂ: ಕೆ.ಎ-65/ಇ-4081 ನೇದರ ಸವಾರನಾದ ನಮೂದಿತ ಆರೋಪಿತನ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ಸುಬ್ಬರಾಯ ತಂದೆ ನಾಗಪ್ಪ ಹೆಗಡೆ, ಪ್ರಾಯ-52 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ರುಂಡಾಳಿ, ತಾ: ಜೋಯಿಡಾ ರವರು ದಿನಾಂಕ: 31-03-2021 ರಂದು 12-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಶಿರಸಿ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 30/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಮೋಹನ ತಂದೆ ಲಕ್ಷ್ಮಣ ಮರಾಠೆ, ಪ್ರಾಯ-37 ವರ್ಷ, ಸಾ|| ಗಣೇಶ ನಗರ, ಮಾರುತಿ ದೇವಸ್ಥಾನದ ಹತ್ತಿರ, ತಾ: ಶಿರಸಿ (ಮೋಟಾರ್ ಸೈಕಲ್ ನಂ: ಕೆ.ಎ-31/ಇ.ಸಿ-4294 ನೇದರ ಸವಾರ). ನಮೂದಿತ ಆರೋಪಿತನು ದಿನಾಂಕ: 27-03-2021 ರಂದು 23-15 ಗಂಟೆಗೆ ತನ್ನ ಮೋಟಾರ್ ಸೈಕಲ್ ನಂ: ಕೆ.ಎ-31/ಇ.ಸಿ-4294 ನೇದನ್ನು ಶಿರಸಿ ಕಡೆಯಿಂದ ಕಡೆಯಿಂದ ಉಂಚಳ್ಳಿ ಕಡೆಗೆ ಅತೀವೇಗವಾಗಿ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಹೋಗುತ್ತಾ, ಶಿರಸಿ-ಬನವಾಸಿ ರಸ್ತೆಯ ಆರೆಕೊಪ್ಪ ಕ್ರಾಸ್ ಹತ್ತಿರ ತನ್ನ ಮೋಟಾರ್ ಸೈಕಲಿನ ವೇಗವನ್ನು ನಿಯಂತ್ರಿಸಲಾಗದೇ ರಸ್ತೆಯ ತೀರಾ ಎಡಬದಿಗೆ ಚಲಾಯಿಸಿ ಪಲ್ಟಿ ಕೆಡವಿ ಅಪಘಾತ ಪಡಿಸಿ, ಮೋಟಾರ್ ಸೈಕಲನ್ನು ಜಖಂಗೊಳಿಸಿ, ತಾನೂ ಸಹ ಮೈಕೈಗೆ ಸಣ್ಣಪುಟ್ಟ ಒಳನೋವು ಪಡಿಸಿಕೊಂಡಿದ್ದಲ್ಲದೇ, ಹಿಂಬದಿ ಸವಾರ ರಘು ತಂದೆ ಸುರೇಶ ಶೆಟ್ಟಿ ಇವರಿಗೆ ತಲೆಯ ಮೇಲೆ ತೆರಚಿದ ಗಾಯ ಮತ್ತು ಬಲಗಾಲಿನ ಮೊಣಕಾಲು, ಪಾದದ ಗಂಟು ಹಾಗೂ ಮಧ್ಯದ ಬೆರಳಿಗೆ ಸಾದಾ ಸ್ವರೂಪ ಗಾಯನೋವು ಪಡಿಸಿದ ಬಗ್ಗೆ ಪಿರ್ಯಾದಿ ಶ್ರೀ ನಾಗರಾಜ ತಂದೆ ಹನುಮಂತ ಬೋವಿ, ಪ್ರಾಯ-29 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಗಣೇಶ ನಗರ, ಮಾರುತಿ ದೇವಸ್ಥಾನ ಹತ್ತಿರ, ತಾ: ಶಿರಸಿ ರವರು ದಿನಾಂಕ: 31-03-2021 ರಂದು 20-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಸಿದ್ದಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 38/2021, ಕಲಂ: 15(ಎ), 32(3) ಕರ್ನಾಟಕ ಅಬಕಾರಿ ಕಾಯ್ದೆ-1965 ನೇದ್ದರ ವಿವರ...... ನಮೂದಿತ ಆರೋಪಿತ ಶ್ರೀನಿವಾಸ ತಂದೆ ನಾರಾಯಣ ನಾಯ್ಕ, ಪ್ರಾಯ-44 ವರ್ಷ, ವೃತ್ತಿ-ಗೌಂಡಿ ಕೆಲಸ, ಸಾ|| ಶಿರಗಳ್ಳೆ ಕೇರಿ, ಅವರಗುಪ್ಪ ಗ್ರಾಮ, ತಾ: ಸಿದ್ದಾಪುರ. ನಮೂದಿತ ಆರೋಪಿತನು ದಿನಾಂಕ: 31-03-2021 ರಂದು ಬೆಳಿಗ್ಗೆ 10-00 ಗಂಟೆಗೆ ಸಿದ್ದಾಪುರ ತಾಲೂಕಿನ ಅವರಗುಪ್ಪಾ ಗ್ರಾಮದ ಶಿರಗಳ್ಳೆ ಕೇರಿಯಲ್ಲಿನ ತನ್ನ ಮನೆಯ ಎದುರಿನ ಅಂಗಳದ ಪಕ್ಕದ ಸಾರ್ವಜನಿಕ ಸ್ಥಳದಲಿ ಅನಧೀಕೃತವಾಗಿ ಸಾರ್ವಜನಿಕರಿಗೆ ಮುಕ್ತವಾಗಿ ಮದ್ಯ ಸೇವನೆ ಮಾಡಲು ಅವಕಾಶ ಮಾಡಿಕೊಟ್ಟಿದ್ದಾಗ ಪಿರ್ಯಾದಿಯವರು ಸಿಬ್ಬಂದಿಗಳೊಂದಿಗೆ ಸೇರಿ ದಾಳಿ ಮಾಡಿದಾಗ 1). Original Choice Deluxe Whisky 90 ML ಅಂತಾ ಬರೆದ ಮದ್ಯ ತುಂಬಿದ 4 ಟೆಟ್ರಾ ಪ್ಯಾಕೆಟ್ ಗಳು. 2). 4 ಪ್ಲಾಸ್ಟಿಕ್ ಗ್ಲಾಸುಗಳು. 3). Captain Martin Whisky 90 ML ಅಂತಾ ಬರೆದ 2 ಮದ್ಯದ ಕಾಲಿ ಟೆಟ್ರಾ ಪ್ಯಾಕೆಟ್ ಗಳೊಂದಿಗೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಮಂಜೇಶ್ವರ ಚಂದಾವರ, ಪಿ.ಎಸ್.ಐ, ಸಿದ್ದಾಪುರ ಪೊಲೀಸ್ ಠಾಣೆ ರವರು ದಿನಾಂಕ: 31-03-2021 ರಂದು 11-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 31-03-2021

at 00:00 hrs to 24:00 hrs

 

ಅಂಕೋಲಾ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 18/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ಶ್ರೀ ಗೋಪಾಲ ತಂದೆ ತಂದೆ ಯುಗಾದಿ ಮುಕ್ರಿ, ಪ್ರಾಯ-45 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಕಲಕಟ್ಟೆ, ಹಳದಿಪುರ, ತಾ: ಹೊನ್ನಾವರ. ನಮೂದಿತ ಮೃತನು ದಿನಾಂಕ: 30-03-2021 ರಂದು ಸಾಯಂಕಾಲ 05-30 ಗಂಟೆಯ ಸುಮಾರಿಗೆ ರಸ್ತೆ ಕೆಲಸ ಮುಗಿಸಿಕೊಂಡು ಅಂಕೋಲಾ ತಾಲೂಕಿನ ಬಿಳಿಸಿರೆ, ಸಗಡಗೇರಿ ರಸ್ತೆಯ ಪಕ್ಕದಲ್ಲಿದ್ದ ಹಳೆಯ ಕಲ್ಲು ಕ್ವಾರಿಯ ಹತ್ತಿರ ಇದ್ದ ನೀರಿನಲ್ಲಿ ಕೈಕಾಲು ತೊಳೆಯಲು ಹೋದವನು ಕುಸಿದು ಬಿದ್ದು ಅಥವಾ ಇನ್ನಾವುದೋ ಕಾರಣದಿಂದ ನೀರಿನಲ್ಲಿ ಬಿದ್ದವನಿಗೆ ಉಪಚಾರದ ಕುರಿತು ಮಾದನಗೇರಿಯ ಆಸ್ಪತ್ರೆಗೆ ಕರೆತಂದು, ಅಲ್ಲಿಂದ ಕುಮಟಾ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ಕರೆದುಕೊಂಡು ಬಂದಾಗ ಆತನಿಗೆ ಪರೀಕ್ಷಿಸಿದ ವೈದ್ಯರು ಸಾಯಂಕಾಲ 07-00 ಗಂಟೆಗೆ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಮೃತನ ಶವವು ಕುಮಟಾದ ಸರಕಾರಿ ಆಸ್ಪತ್ರೆಯ ಶವಾಗಾರದಲ್ಲಿದ್ದು, ಈ ಕುರಿತು ಮುಂದಿನ ಕಾನೂನು ಕ್ರಮ ಕೈಗೊಂಡು ಮೃತದೇಹವನ್ನು ಬಿಟ್ಟುಕೊಡಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ಸತ್ಯನಾರಾಯಣ ತಂದೆ ಯುಗಾದಿ ಮುಕ್ರಿ, ಪ್ರಾಯ-35 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಕಲಕಟ್ಟೆ, ಹಳದಿಪುರ, ತಾ: ಹೊನ್ನಾವರ ರವರು ದಿನಾಂಕ: 31-03-2021 ರಂದು 14-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಅಂಕೋಲಾ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 19/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ಕುಮಾರ: ಆರ್ಯನ್ ತಂದೆ ಚಂದ್ರಕಾಂತ ಹರಿಕಂತ್ರ, ಪ್ರಾಯ-05 ವರ್ಷ, ಸಾ|| ಕರ್ಕಿತೂರಿ, ಅಗ್ರಗೋಣ, ತಾ: ಅಂಕೋಲಾ. ನಮೂದಿತ ಮೃತನು ದಿನಾಂಕ: 31-03-2021 ರಂದು ಸಾಯಂಕಾಲ 18-15 ಗಂಟೆಗೆ ಅಂಕೋಲಾ ತಾಲೂಕಿನ ಕರ್ಕಿತೂರಿಯ ಗಜನಿ ಪ್ರದೇಶದ ರಸ್ತೆಯಲ್ಲಿ ಇತರ ಮಕ್ಕಳೊಂದಿಗೆ ಆಟವಾಡುತ್ತಾ ಇದ್ದಾಗ ಆಕಸ್ಮಿಕವಾಗಿ ಆಯ ತಪ್ಪಿ ಗಜನಿಯ ನೀರಿನಲ್ಲಿ ಬಿದ್ದು ಮುಳುಗಿದವನಿಗೆ ಉಪಚಾರಕ್ಕಾಗಿ ಗೋಕರ್ಣದ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಾಗ ಆತನನ್ನು ಪರೀಕ್ಷಿಸಿದ ವೈದ್ಯರು 19-00 ಗಂಟೆಗೆ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಕುರಿತು ಮುಂದಿನ ಕಾನೂನು ಕ್ರಮ ಕೈಗೊಂಡು ಮೃತದೇಹವನ್ನು ಬಿಟ್ಟುಕೊಡಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀಮತಿ ಭಾರತಿ ಚಂದ್ರಕಾಂತ ಹರಿಕಂತ್ರ ಸತ್ಯನಾರಾಯಣ ತಂದೆ ಯುಗಾದಿ ಮುಕ್ರಿ, ಪ್ರಾಯ-32 ವರ್ಷ, ವೃತ್ತಿ-ಮನೆ ಕೆಲಸ, ಸಾ|| ಕರ್ಕಿತೂರಿ, ಅಗ್ರಗೋಣ, ತಾ: ಅಂಕೋಲಾ ರವರು ದಿನಾಂಕ: 31-03-2021 ರಂದು 20-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ಇತ್ತೀಚಿನ ನವೀಕರಣ​ : 02-04-2021 04:11 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080