ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 31-10-2021

at 00:00 hrs to 24:00 hrs

 

ಕುಮಟಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 183/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಗಜಾನನ ತಂದೆ ಯಶವಂತ ಜಾಧವ, ಪ್ರಾಯ-42 ವರ್ಷ, ವಾಸ: ಪಾಚಪುರ ಪೋಸ್ಟ್, ತಾ: ಜಿತ್, ಜಿ: ಸಾಂಗ್ಲಿ, ಮಹಾರಾಷ್ಟ್ರ (ಕಂಟೇನರ್ ವಾಹನ ನಂ: ಎಮ್.ಎಚ್-46/ಎ.ಎಫ್-7546). ಈತನು ದಿನಾಂಕ: 30-10-2021 ರಂದು 23-00 ಗಂಟೆಯ ವೇಳೆಗೆ ತಾನು ಚಲಾಯಿಸುತ್ತಿದ್ದ ಕಂಟೇನರ್ ವಾಹನ ನಂ: ಎಮ್.ಎಚ್-46/ಎಎಫ್-7546 ನೇದನ್ನು ರಾಜ್ಯ ಹೆದ್ದಾರಿ ಸಂಖ್ಯೆ-66 ರ ಮೇಲೆ ಅಂಕೋಲಾ ಕಡೆಯಿಂದ ಹೊನ್ನಾವರ ಕಡೆಗೆ ಹೋಗಲು ಅತೀವೇಗವಾಗಿ ಚಲಾಯಿಸಿಕೊಂಡು ಹೊರಟು ಕುಮಟಾ ಪಟ್ಟಣದ ಗಾಂಧಿನಗರ 4 ನೇ ಕ್ರಾಸ್ ಹತ್ತಿರ ತನ್ನ ಮುಂದಿನಿಂದ ಪಿರ್ಯಾದಿಯವರು ಪ್ರಯಾಣಿಸುತ್ತಿದ್ದ ಕಾರ್ ನಂ: ಕೆ.ಎ-50/ಎಮ್.ಎ-4013 ನೇದಕ್ಕೆ ನಿಷ್ಕಾಳಜಿಯಿಂದ ಹಿಂದಿನಿಂದ ಢಿಕ್ಕಿ ಹೊಡೆದು ಅಪಘಾತ ಪಡಿಸಿ, ಪಿರ್ಯಾದಿಯವರಿಗೆ ತಲೆಗೆ ಹಾಗೂ ಎಡಗಾಲಿಗೆ, ಕಾರ್ ಚಾಲಕ ದರ್ಶನ ಇವರಿಗೆ ತಲೆಯ ಹಿಂಬದಿಗೆ, ಬೆನ್ನಿಗೆ, ಕಾಲಿಗೆ, ತುಟಿಗೆ ಹಾಗೂ ಪಿರ್ಯಾದಿಯ ಹೆಂಡತಿ ಸುಜಾತಾ ಇವಳ ಎದೆಗೆ ಗಾಯನೋವು ಆಗಲು ಆರೋಪಿ ಕಂಟೇನರ್ ವಾಹನದ ಚಾಲಕನೇ ಕಾರಣನಾದ ಬಗ್ಗೆ ಪಿರ್ಯಾದಿ ಶ್ರೀ ಶಿವಣ್ಣ ಟಿ. ಬಿ. ತಂದೆ ಭೋಪಯ್ಯ, ಪ್ರಾಯ-56 ವರ್ಷ, ವೃತ್ತಿ-ಬಿಸಿನೆಸ್, ಸಾ|| ಶ್ರೀರಂಗನಾಥ ನಿಲಯ, ಕೆ.ಇ.ಬಿ ಲೇಔಟ್, ಸಪ್ತಗಿರಿ ಬಡಾವಣೆ, ಸಪ್ತಗಿರಿ ಪಿ.ಯು ಕಾಲೇಜ್, ತುಮಕೂರು ರವರು ದಿನಾಂಕ: 31-10-2021 ರಂದು 13-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹೊನ್ನಾವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 285/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಅಜೇಯ ಕೆ. ಎಮ್. ತಂದೆ ಚಂದ್ರಶೇಖರ ಕೆ. ಎಂ, ಪ್ರಾಯ-23 ವರ್ಷ, ವೃತ್ತಿ-ಖಾಸಗಿ ಕಂಪನಿ ಉದ್ಯೋಗಿ, ಸಾ|| 27, 1 ನೇ ಮೇನ್, ನಾಗದೇವನಹಳ್ಳಿ, ಬೆಂಗಳೂರು (ಕಾರ್ ನಂ: ಕೆ.ಎ-02/ಎಮ್.ಸಿ-9930 ನೇದರ ಚಾಲಕ). ಈತನು ದಿನಾಂಕ: 31-10-2021 ರಂದು ಮಧ್ಯಾಹ್ನ 14-30 ಗಂಟೆಯ ಸಮಯಕ್ಕೆ ತಾನು ಚಲಾಯಿಸುತ್ತಿದ್ದ ಕಾರ್ ನಂ: ಕೆ.ಎ-02/ಎಮ್.ಸಿ-9930 ನೇದನ್ನು ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-69 ರಲ್ಲಿ ಗೇರುಸೊಪ್ಪ ಕಡೆಯಿಂದ ಹೊನ್ನಾವರ ಕಡೆಗೆ ಅತೀವೇಗವಾಗಿ ಹಾಗು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಖರ್ವಾ ಕ್ರಾಸ್ ಹತ್ತಿರ ಒಮ್ಮೇಲೆ ಕಾರನ್ನು ತನ್ನ ಬಲಬದಿಗೆ ಚಲಾಯಿಸಿ, ತಮ್ಮ ಬದಿಯಿಂದ ಹೋಗುತ್ತಿದ್ದ ಮೋಟಾರ್ ಸೈಕಲ್ ನಂ: ಕೆ.ಎ-47/ಆರ್-4673 ಹಾಗೂ ಕೆ.ಎ-27/ಯು-9760 ನೇದಕ್ಕೆ ಡಿಕ್ಕಿ ಪಡಿಸಿ, ಮೋಟಾರ್ ಸೈಕಲ್ ನಂ: ಕೆ.ಎ-47/ಆರ್-4673 ನೇದರ ಸವಾರ ಜುಲ್ಫಿಕರ್ ಖಾಜಾ ಜುವಾಪು, ಪ್ರಾಯ-35 ವರ್ಷ, ವೃತ್ತಿ-ವಿದೇಶದಲ್ಲಿ ಕೆಲಸ, ಸಾ|| ಹೆರೆಂಗಡಿ, ತಾ: ಹೊನ್ನಾವರ ಇವರಿಗೆ ತಲೆಗೆ, ಮುಖಕ್ಕೆ ಹಾಗೂ ಬಲಗಾಲಿಗೆ ಮತ್ತು ಹಿಂಬದಿ ಸವಾರ ಜಾಯಿದ್ ತಂದೆ ಖಾಜಾ ಅಪ್ಸರ್, ಪ್ರಾಯ-23 ವರ್ಷ, ವೃತ್ತಿ-ಸೇಲ್ಸಮೆನ್, ಸಾ|| ಹೆರಂಗಡಿ, ತಾ: ಹೊನ್ನಾವರ ಇವರಿಗೆ ಬಲಗಾಲ ಬೆರಳಿಗೆ ಹಾಗೂ ತಲೆಗೆ, ಮೋಟಾರ್ ಸೈಕಲ್ ನಂ: ಕೆ.ಎ-27/ಯು-9760 ನೇದರ ಸವಾರ ಶಿವಯ್ಯ ತಂದೆ ಮಹಾಲಿಂಗಯ್ಯ ಗಣಾಚಾರಿ, ಪ್ರಾಯ-18 ವರ್ಷ, ಸಾ|| ಹೊಸಳ್ಳಿ, ಗದಗ ಇವರಿಗೆ ಬಲಗಣ್ಣಿನ ಹತ್ತಿರ ಹಾಗೂ ಎಡಗಾಲಿಗೆ ದುಃಖಾಪತ್ ಪಡಿಸಿದ್ದಲ್ಲದೇ, ಕಾರಿನಲ್ಲಿದ್ದ ದೀಕ್ಷಿತ್ ತಂದೆ ಪ್ರಭು, ಪ್ರಾಯ-23 ವರ್ಷ, ಸಾ|| ಲಗ್ಗೆರೆ, ಬೆಂಗಳೂರು ಇವರಿಗೆ ಸಹ ತಲೆಗೆ, ಮುಖಕ್ಕೆ ಹಾಗೂ ಬಲಗೈಗೆ ದುಃಖಾಪತ್ ಪಡಿಸಿ, ಆರೋಪಿ ಚಾಲಕನು ತನಗೂ ಸಹ ಕೈ ಕಾಲಿಗೆ ತೆರಚಿದ ಗಾಯ ಪಡಿಸಿಕೊಂಡ ಬಗ್ಗೆ ಪಿರ್ಯಾದಿ ಶ್ರೀ ರಿಯಾಜ್ ತಂದೆ ಹಸನ್ ಅಪ್ಸರ್, ಪ್ರಾಯ-43 ವರ್ಷ, ವೃತ್ತಿ-ಸೇಲ್ಸಮೆನ್, ಸಾ|| ಹೆರೆಂಗಡಿ, ತಾ: ಹೊನ್ನಾವರ ರವರು ದಿನಾಂಕ: 31-10-2021 ರಂದು 17-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಶಿರಸಿ ನಗರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 72/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಪ್ರಸಾದ ತಂದೆ ಮಹಾಬಲೇಶ್ವರ ಹೆಗಡೆ, ಪ್ರಾಯ-22 ವರ್ಷ, ವೃತ್ತಿ-ಖಾಸಗಿ ಕೆಲಸ, ಸಾ|| ಕಂಪ್ಲಿ, ಮಂಚಿಕೇರಿ, ತಾ: ಯಲ್ಲಾಪುರ (ಮೋಟಾರ್ ಸೈಕಲ್ ನಂ: ಕೆ.ಎ-31/ಇ.ಡಿ-0973 ನೇದರ ಸವಾರ). ಈತನು ದಿನಾಂಕ: 31-10-2021 ರಂದು 15-45 ಗಂಟೆಯ ಸುಮಾರಿಗೆ ಶಿರಸಿ ಶಹರದ ಪಡ್ತಿ ಗಲ್ಲಿಯ ಅಭಿಮನ್ಯು ಸರ್ಕಲ್ ಹತ್ತಿರ ತಾನು ಚಲಾಯಿಸಿಕೊಂಡು ಬಂದ ಮೋಟಾರ್ ಸೈಕಲ್ ನಂ: ಕೆ.ಎ-31/ಇ.ಡಿ-0973 ನೇದನ್ನು ದೇವಿಕೆರೆ ಕಡೆಯಿಂದ ಕದಂಬ ಸರ್ಕಲ್ ಕಡೆಗೆ ಹೋಗಲು ಅತೀವೇಗವಾಗಿ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದವನು, ತನ್ನ ವಾಹನವನ್ನು ನಿಯಂತ್ರಿಸಲಾಗದೇ ಪಡ್ತಿ ಗಲ್ಲಿಯಿಂದ ರಾಘವೇಂದ್ರ ಸರ್ಕಲ್ ಕಡೆಗೆ ಪಿರ್ಯಾದಿಯು ಚಲಾಯಿಸಿಕೊಂಡು ಹೋಗುತ್ತಿದ್ದ ಕಾರ್ ನಂ: ಕೆ.ಎ-19/ಎಮ್.ಇ-6774 ನೇದಕ್ಕೆ ಡಿಕ್ಕಿ ಹೊಡೆದು, ಆರೋಪಿ ಮೋಟಾರ್ ಸೈಕಲ್ ಸವಾರನು ತಾನು ಸಹ ಮೋಟಾರ್ ಸೈಕಲ್ ಸಮೇತ ರಸ್ತೆಯ ಮೇಲೆ ಬಿದ್ದು ಅಪಘಾತ ಪಡಿಸಿಕೊಂಡು, ಗಾಯನೋವು ಪಡಿಸಿಕೊಂಡ ಬಗ್ಗೆ ಪಿರ್ಯಾದಿ ಶ್ರೀ ಹರಿಪ್ರಸಾದ ತಂದೆ ನಾರಾಯಣ ಪೂಜಾರಿ, ಪ್ರಾಯ-28 ವರ್ಷ, ವೃತ್ತಿ-ಖಾಸಗಿ ಕೆಲಸ, ಸಾ|| ಟಿಪ್ಪು ನಗರ, ಬನವಾಸಿ ರೋಡ್, ತಾ: ಶಿರಸಿ ರವರು ದಿನಾಂಕ: 31-10-2021 ರಂದು 21-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಮುಂಡಗೋಡ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 141/2021, ಕಲಂ: 323, 324, 504, 506 ಸಹಿತ 34 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ಶಶಿಕಲಾ ಕೋಂ. ಬಸವರಾಜ ಭೋವಿ, 2]. ಶಿವನಾಗಮ್ಮ ಕೋಂ. ಹನುಮಂತ ತಳವಾರ, ಸಾ|| (ಇಬ್ಬರೂ) ಸಿದ್ದಾಪೂರ ಓಣಿ, ಮಳಗಿ, ತಾ: ಮುಂಡಗೋಡ. ಈ ನಮೂದಿತ ಆರೋಪಿತರು ಕೂಡಿಕೊಂಡು ದಿನಾಂಕ: 31-10-2021 ರಂದು 02-00 ಗಂಟೆಯ ಸುಮಾರಿಗೆ ಪಿರ್ಯಾದಿಯವರಿಗೆ ಕೈಯಿಂದ ಹಾಗೂ ಬಡಿಗೆಯಿಂದ ಹೊಡೆಬಡೆ ಮಾಡಿ ನೆಲಕ್ಕೆ ದೂಡಿ ಕೆಡವಿದ್ದರಿಂದ ಪಿರ್ಯಾದಿಯ ಎಡಭುಜಕ್ಕೆ, ಎದೆಯ ಬಲಭಾಗದಲ್ಲಿ ಹಾಗೂ ಬೆನ್ನಿನ ಭಾಗದಲ್ಲಿ ಒಳನೋವು ಪಡಿಸಿ, ತಲೆಯಲ್ಲಿ ರಕ್ತ ಬರುವಂತೆ ಗಾಯನೋವು ಪಡಿಸಿ, ಜೀವದ ಬೆದರಿಕೆ ಹಾಕಿದ ಬಗ್ಗೆ ಪಿರ್ಯಾದಿ ಶ್ರೀಮತಿ ಹನುಮವ್ವ ಕೋಂ. ಮಂಜಪ್ಪ ಭೋವಿವಡ್ಡರ, ಪ್ರಾಯ-65 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಸಿದ್ದಾಪುರ ಓಣಿ, ಮಳಗಿ, ತಾ: ಮುಂಡಗೋಡ ರವರು ದಿನಾಂಕ: 31-10-2021 ರಂದು 19-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿ.  

 

ಹಳಿಯಾಳ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 167/2021, ಕಲಂ: 379 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರಾದ ಯಾರೋ ಕಳ್ಳರು ದಿನಾಂಕ: 25-08-2021 ರಂದು ಬೆಳಿಗ್ಗೆ 11-00 ಗಂಟೆಯಿಂದ ದಿನಾಂಕ: 28-10-2021 ರಂದು ಸಂಜೆ 17-00 ಗಂಟೆಯ ನಡುವಿನ ಅವಧಿಯಲ್ಲಿ ಹಳಿಯಾಳ ತಾಲೂಕಿನ ಕಾಳಗಿನಕೊಪ್ಪದ ಪಿರ್ಯಾದಿಯವರ ದಡ್ಡಿ ಮನೆಯಲ್ಲಿ ನಿಲ್ಲಿಸಿದ್ದ ಸುಮಾರು 25,000/- ರೂಪಾಯಿ ಮೌಲ್ಯದ ಕಪ್ಪು ಬಣ್ಣದ ಹೀರೋ ಹೋಂಡಾ ಸ್ಲೆಂಡರ್ ಮೋಟಾರ್ ಸೈಕಲ್ ನಂ: ಕೆ.ಎ-31/ಎಲ್-9504 ನೇದನ್ನು ಕಳ್ಳತನ ಮಾಡಿಕೊಂಡು ಹೋದ ಬಗ್ಗೆ ಪಿರ್ಯಾದಿ ಶ್ರೀ ತುಕಾರಾಮ ತಂದೆ ನಾಗಪ್ಪ ಗೋಡಿಮನಿ, ಪ್ರಾಯ-38 ವರ್ಷ, ಸಾ|| ಕಾಳಗಿನಕೊಪ್ಪ, ತಾ: ಹಳಿಯಾಳ ರವರು ದಿನಾಂಕ: 31-10-2021 ರಂದು 12-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 31-10-2021

at 00:00 hrs to 24:00 hrs

 

ಚಿತ್ತಾಕುಲಾ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 13/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ದೀಪಕ ತಂದೆ ದಾಮೋದರ ತಾಮ್ಸೆ, ಪ್ರಾಯ-46 ವರ್ಷ, ವೃತ್ತಿ-ಖಾಸಗಿ ಕೆಲಸ, ಸಾ|| ಅಗರಕಟ್ಟಾ, ಮಾವಿನಹೊಳೆ, ಸದಾಶಿವಗಡ, ಕಾರವಾರ. ಈತನು ಸುಮಾರು ದಿನಗಳಿಂದ ಥೈರಾಯ್ಡ್ ಸಮಸ್ಯೆಯಿಂದ ಬಳಲುತ್ತಿದ್ದವನು, ಔಷಧೋಪಚಾರ ಮಾಡಿಕೊಂಡಿದ್ದನು. ಇದೇ ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡು ಮನೆಯವರೊಂದಿಗೆ ಯಾರೊಂದಿಗೂ ಸರಿಯಾಗಿ ಮಾತನಾಡುತ್ತಿರಲಿಲ್ಲ. ಇದೇ ವಿಷಯಕ್ಕೆ ಮಾನಸಿಕವಾಗಿ ಮನನೊಂದು ಆತ್ಮಹತ್ಯೆ ಮಾಡಿಕೊಳ್ಳುವ ಉದ್ದೇಶದಿಂದ ದಿನಾಂಕ: 31-10-2021 ರಂದು ಬೆಳಿಗ್ಗೆ ಪಿರ್ಯಾದಿಯ ಮನೆಯ ಹಿಂದಿನ ಬಾವಿಗೆ ಹೋಗಿ ಬಾವಿಯಲ್ಲಿ ಹಾರಿ 10-30 ಗಂಟೆಯಿಂದ 11-15 ಗಂಟೆಯ ನಡುವಿನ ಅವಧಿಯಲ್ಲಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದು, ಇದರ ಹೊರತು ಮೃತನ ಮರಣದಲ್ಲಿ ಬೇರೇ ಯಾವುದೇ ಸಂಶಯ ಇರುವುದಿಲ್ಲ. ಈ ಕುರಿತು ಮುಂದಿನ ಕಾನೂನು ಕ್ರಮ ಕೈಗೊಳ್ಳಬೇಕು ಎಂಬ ಬಗ್ಗೆ ಪಿರ್ಯಾದಿ ಶ್ರೀಮತಿ ರೂಪಾಲಿ ಕೋಂ. ರಾಜೇಂದ್ರ ತಾಮ್ಸೆ, ಪ್ರಾಯ-42 ವರ್ಷ, ವೃತ್ತಿ-ಮನೆ ಕೆಲಸ, ಸಾ|| ಅಗರಕಟ್ಟಾ, ಮಾವಿನಹೊಳೆ, ಸದಾಶಿವಗಡ, ಕಾರವಾರ ರವರು ದಿನಾಂಕ: 31-10-2021 ರಂದು 12-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

ಇತ್ತೀಚಿನ ನವೀಕರಣ​ : 02-11-2021 01:44 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080